Wednesday, April 6, 2016

We salute Yograj Bhat for Writing the Song over II PU Chemistry Question Paper Leak !

ಜೈ ರಸಾಯನ ಶಾಸ್ತ್ರ: ನಮ್ಮ ರಾಜಕೀಯ ವ್ಯಕ್ತಿಗಳು ತಮಗೆ ಬೇಕಾಗಿರೊ ಯಾವುದೋ ನಾಲ್ಕು ಜನರ ಸಹಾಯ ಮಾಡೊಕ್ಕೋಗಿ ಇಡೀ ರಾಜ್ಯದ ವಿಧ್ಯಾರ್ಥಿಗಳ ಭವಿಷ್ಯವನ್ನು ಬೀದಿಗೆ ತರುವ ಕೆಲಸ ಮಾಡಿದ್ದಾರೆ !!
ಯೋಗರಾಜ್ ಮತ್ತು ದುನಿಯಾ ವಿಜಯ್ ಮೇಲೆ ದೂರು ನೀಡಿರುವ ಕಾಂಗ್ರೆಸ್ಸ್ ಸರ್ಕಾರದಲ್ಲಿರುವ ಭ್ರಷ್ಟ ಮಂತ್ರಿಗಳ ವಿರುದ್ದ ಇಡೀ ಕರ್ನಾಟಕ ಜನತೆ ಸಿಡಿಮಿಡಿಗೊಂಡಿದೆ ಕಾರಣ ನಮ್ಮ ಭಟ್ರು ಯಾವತ್ತೂ ಸತ್ಯನೇ ಬರೆಯೋದು


ನಮ್ಮ ಭಟ್ಟ್ರು ಒಂದೊದ್ಸಾರಿ ಕಟುವಾಗಿ-ಮತ್ತೊಂದ್ಸಾರಿ ವ್ಯಂಗ್ಯವಾಗಿ ಬರೆಯೋದು ಅವರ ಶೈಲಿ,  ಅದರಲ್ಲಿ ನಮ್ಮ ಸಮಾಜದ ಬಗ್ಗೆ ಅವರಿಗಿರೋ ಕಳಕಳಿ ತೋರಿಸುತ್ತೆ,  ಅದಕ್ಕೆ ನಮ್ಮ ಭಟ್ಟ್ರು ಗ್ರೇಟ್,  ನೀವೇನಂತೀರಾ ??
ನಮ್ಮ ಭಟ್ರ ಈ ಪ್ರಯತ್ನ ನಿಮಗಿಷ್ಟವಾದ್ರೆ ಲೈಕ್ ಮಾಡಿ, ಶೇರ್ ಮಾಡಿ, ಗೆಳೆಯರೊಟ್ಟಿಗೆ ಹಂಚಿಕೊಳ್ರಿ !


    ಸುದ್ದಿಮನೆ: ಪಿಯುಸಿ ದ್ವಿತೀಯ ವರ್ಷದ ರಸಾಯನಶಾಸ್ತ್ರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಅಧಿಕಾರಿಗಳಿಗೆ ಟಾಂಗ್ ಕೊಟ್ಟು ನಿರ್ದೇಶಕ ಯೋಗರಾಜ್ ಭಟ್ ಹಾಡೊಂದನ್ನು ಬರೆದಿದ್ದಾರೆ. ಈ ಪಿಸಿಎಂಬಿ ತೀಟೆ ಹಾಡು ಕೇಳ್ರಪ್ಪಾ...ಎಂದು ಆರಂಭವಾಗುವ ಈ ಹಾಡು ಪೋಷಕರು ಹಾಗು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಸರ್ಕಾರ ಮತ್ತು ಪಿಯು ಬೋರ್ಡ್‌ನ ಬೇಜವಾಬ್ದಾರಿತನವನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸಿದ ಭಟ್ರು, ಇದಕ್ಕೆ ಕಾರಣವಾದ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಎರಡೆರಡು ಬಾರಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮಕ್ಕಳು ಮತ್ತು ಹೆತ್ತವರು ಅನುಭವಿಸುವ ಸಂಕಟವನ್ನು ವಿವರಿಸುವ ಈ ಹಾಡು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರನ್ನು ಬಯ್ಯುವ ಧಾಟಿಯಲ್ಲಿದೆ.
ಗುರುವಾರ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಈ ಹಾಡು ರೆಕಾರ್ಡಿಂಗ್ ನಡೆದಿದೆ. ಚೇತನ್ ಸೊಸ್ಕಾ ಅವರು ಈ ಹಾಡನ್ನು ಸಂಯೋಜಿಸಿದ್ದು, ದುನಿಯಾ ವಿಜಿ ಹಾಡಿಗೆ ದನಿಯಾಗಿದ್ದಾರೆ. ಯೋಗರಾಜ್ ಭಟ್‌ರ ಈ ಹೊಸ ಹಾಡು ಈಗಾಗಲೇ ವಾಟ್ಸಾಪ್ ಮೂಲಕ ಹರಿದಾಡುತ್ತಿದ್ದು, ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

ನಮ್ಮ ಭಟ್ರ ಈ ಪ್ರಯತ್ನ ನಿಮಗಿಷ್ಟವಾದ್ರೆ ಲೈಕ್ ಮಾಡಿ, ಶೇರ್ ಮಾಡಿ, ಗೆಳೆಯರೊಟ್ಟಿಗೆ ಹಂಚಿಕೊಳ್ರಿ !

No comments:

Post a Comment

Vishwa Manava Concept by Kuvempu

Search this blog