ಗುಂಡ ಬಲು ಜಿಪುಣ .
ಗೆಳೆಯನ ಮನೆ ಸತ್ಯನಾರಾಯಣ ಸ್ವಾಮಿ ಪೂಜೆಗೆ ಹೋಗಿದ್ದ .
ಮಂಗಳಾರತಿ ಆಯ್ತು , ಎಲ್ಲ ತಟ್ಟೆಗೆ ದಕ್ಷಿಣೆ ಹಾಕ್ತಾ ಇದ್ರು .
ನಮ್ಮ ಗುಂಡ ಜೀಬಿನಿಂದ ಒಂದು ಹಳೆ 2 ರೂಪಾಯಿ ನೋಟು ತೆಗೆದು ಸ್ವಲ್ಪ ಸಂಕೋಚದಿಂದ ಯಾರಿಗೂ ಕಾಣದಂತೆ ತಟ್ಟೆಗೆ ಹಾಕಿದ.
ಅಷ್ಟರಲ್ಲಿ ಹಿಂದೆಯಿಂದ ಯಾರೋ ಭುಜ ತಟ್ಟಿದ್ರು ತಿರುಗಿದ ಗುಂಡನ ಕೈಗೆ 500 ರೂಪಾಯಿ ನೋಟು ಕೊಟ್ರು.
ತೆಗೆದುಕೊಂಡ ಗುಂಡ ಈಗ ಎಲ್ಲರ ಎದುರು ಹಿರಿಮೆಯಿಂದ ತಟ್ಟೆಗೆ 500 ರೂಪಾಯಿ ಹಾಕಿದ.
ಮತ್ತೆ ಹಿಂದೆ ತಿರುಗಿ ದುಡ್ಡು ಕೊಟ್ಟ ವ್ಯಕ್ತಿಯೆಡೆಗೆ ನಗು ಬೀರಿ 'ಹಾಕಿದೆ , ನಿಮ್ಮದು ಉದಾರ ಬುದ್ದಿ' ಅಂದ.
ಹಿಂದೆ ಇದ್ದ ವ್ಯಕ್ತಿ 'ನನಗೆ ಯಾಕೆ ಥ್ಯಾಂಕ್ಸ್ ಸ್ವಾಮಿ, ನಿಮ್ಮ ಜೇಬಿಂದ ಬಿದ್ದಿತ್ತು ತೆಗೆದುಕೊಟ್ಟೆ. ದುಡ್ಡು ಸ್ವಲ್ಪ ಜೋಪಾನವಾಗಿ ಇಟ್ಕೊಳ್ಳಿ "
ಗುಂಡ ಮೂರ್ಛೆ ಹೋದ...
Soooper
ReplyDelete