Sunday, November 27, 2016

We don't support 28th Nov Bandh because :

ನವೆಂಬರ್ 14 ಮಕ್ಕಳ ದಿನ , ನವೆಂಬರ್ 28 ಕಳ್ ನನ್ ಮಕ್ಕಳ ದಿನ

ಪ್ರತಿಭಟನೆ,ಬಂದ್ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುವ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಕರ್ತವ್ಯ ರಾಜ್ಯ ಸರ್ಕಾರದ್ದು. 

ಆದರೆ ಬೆಳಗಾವಿ ಅಧಿವೇಶನದಲ್ಲಿ ಪೋಲಿಸ್ ಅಧಿಕಾರಿಗಳನ್ನು ಬೀದಿಯಲ್ಲಿ ಸ್ನಾನ/ಶೌಚಾಲಯ ಮಾಡುವಂತೆ ಸಿದ್ದತೆ ನೆಡೆಸಿದ ಸಿದ್ಧರಾಮಯ್ಯನವರ #ತುಘಲಕ್_ದರ್ಬಾರ್ ನಲ್ಲಿ ಬೇಲಿಯೇ ಎದ್ದು ಹೊಲ ಮೇಯುವುದೇನು ಹೊಸತಲ್ಲ. ಬಂದ್'ಗೆ ಬೆಂಬಲವಿಲ್ಲ ಎಂದು ಬಹಿರಂಗವಾಗಿ ಹೇಳುವ ಮುಖ್ಯಮಂತ್ರಿಗಳು, ಸರ್ಕಾರಿ ಬಸ್ಸುಗಳನ್ನು ರಸ್ತೆಗೆ ಇಳಿಸದಂತೆ ಮೌಖಿಕ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಖುದ್ದು ಗೃಹ ಸಚಿವರೇ ಮೆಟ್ರೋ ಮತ್ತು ಸರ್ಕಾರಿ ಸಾರಿಗೆ ವ್ಯವಸ್ಥೆ ಇರುವುದಿಲ್ಲ ಎನ್ನುತ್ತಾರೆ! 

ಸಂಸತ್ತು,ಸಂವಿಧಾನ,ವಿಧಾನಸಭೆಯ ಬಗ್ಗೆ ಪುಂಖಾನುಪುಂಖವಾಗಿ ಪೀಟೀಲು ಕುಯ್ಯುವ ಈ ಕಾಂಗ್ರೆಸ್ ಪಕ್ಷದವರ ಸರ್ಕಾರ ಬಂದ್ ನೆಪದಲ್ಲಿ ಅಧಿವೇಶನವನ್ನೂ ಮುಂದೂಡಿದೆ. 

ಒಂದೆಡೆ ರಾಜ್ಯದ ಜನಸಾಮಾನ್ಯರೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಕ್ಕೆ ನಿಂತಿದ್ದರೆ,ಮತ್ತೊಂದು ಕಡೆ  ಸರ್ಕಾರವೇ ರಾಜ್ಯವನ್ನು ಬಂದ್ ಮಾಡಲು ಹೊರಟು ನಿಂತಿದೆ.

ಈ #ತುಘಲಕ್_ದರ್ಬಾರಿಗೆ ಸೆಡ್ಡು ಹೊಡೆದು ಭಾರತ್ ಬಂದ್'ಗೆ ನಮ್ಮ ಬೆಂಬಲವಿಲ್ಲ ಎಂದು ಘಂಟಾಘೋಷವಾಗಿ ಹೇಳಬೇಕಾದದ್ದು ಭ್ರಷ್ಟಾಚಾರ ವಿರೋಧಿಸುವ ಪ್ರತಿಯೊಬ್ಬ ನಾಗರೀಕನ ಕರ್ತವ್ಯ. 

"ಬಂದ್ ಇಲ್ಲ - ನನ್ನ ಬೆಂಬಲ ದೇಶಕ್ಕೆ" ಎಂಬ ಈ ಸ್ಟಿಕ್ಕರನ್ನು ನಮ್ಮ ವಾಹನಗಳಿಗೆ, ಅಂಗಡಿಗಳಿಗೆ ಅಂಟಿಸಿಕೊಂಡು ಭ್ರಷ್ಟಾಚಾರಿಗಳ ವಿರುದ್ಧ ದನಿ ಎತ್ತೋಣ. ಸಾಧ್ಯವಾದರೆ ನಮ್ಮ ವಾಹನಗಳಲ್ಲಿ ಇತರರಿಗೂ ಲಿಫ್ಟ್ ಕೊಡೋಣ.

 #Power Of Common Man ಅಂದರೇನು ಎಂದು ಸಿಎಂ ಸಿದ್ಧರಾಮಯ್ಯನವರ ಸರ್ಕಾರಕ್ಕೆ ತೋರಿಸೋಣ.

ಈ ಸ್ಟಿಕರ್ ಬೇಕಾದವರು "ಗಣೇಶ್ ಉಡುಪ - +919448065064" ಅವರನ್ನು ಸಂಪರ್ಕಿಸಬಹುದು.

No comments:

Post a Comment

Vishwa Manava Concept by Kuvempu

Search this blog