
ಸರ್ಕಾರ/ಅಧಿಕಾರದಲ್ಲಿರುವ ಎಲ್ಲರೂ ಅವರವರ ಸ್ವಾರ್ಥಕ್ಕೆ ಕನ್ನಡ-ನಾಡು-ನುಡಿ-ಜಲ-ಸಂಸ್ಕೃತಿ, ಅಭಿವೃದ್ದಿಯ ಹೆಸರಿನಲ್ಲಿ ಕನ್ನಡಿಗರನ್ನು ಲೂಟಿ ಹೊಡೆಯುತ್ತಿದ್ದಾರೆ ! ಯಾರಿಗೂ ಕನ್ನಡ ಉಳಿಸುವ ಉದ್ದೇಶವಿಲ್ಲ ತೋರಿಕೆಗೆ ಮಾತ್ರ ಕನ್ನಡ ಕನ್ನಡ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ನಾವೆಲ್ಲ ಸುಮ್ಮನಿದ್ದೇವೆ !
ಇನ್ನು ಕನ್ನಡಿಗರಾದ ನಮ್ಮ ನಿಮ್ಮ ನಡುವೆಯೇ ತಮ್ಮ ಸ್ವಾರ್ಥ ಸಾಧನೆಗೆ ಮೋಸ, ನಯ-ವಂಚನೆ, ಅನ್ಯಾಯ ಮಾಡಿಕೊಂಡು ಸಮಾಜದಲ್ಲಿ ತಾವೇ ಸಾಚಾ ವ್ಯಕ್ತಿಗಳಂತೆ ವರ್ತಿಸುತ್ತಾ ಮೆರೆಯುತ್ತಿರುವ ಕೆಲವು ಕನ್ನಡಿಗರು ನಮ್ಮ ಸಮಾಜದ ಸ್ವಾಸ್ಥ್ಯ ವನ್ನು ಹಾಳು ಮಾಡುತ್ತಿದ್ದಾರೆ. ನಿಜವಾದ ಕನ್ನಡತನ ಇವರಲ್ಲಿಲ್ಲ ! ನಿಜವಾದ ಕನ್ನಡಿಗರೆಂದರೆ ವಿಶಾಲ ಹೃದಯವಂತರು, ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮಾನವೀಯತೆಯುಳ್ಳವರು, ಎಲ್ಲರನ್ನೂ ಒಳ್ಳೆಯವರೆಂದು ನಂಬುವ ಮುಗ್ಧ-ಮಾನವರು,
ಇದನ್ನೇ ಬಲಹೀನತೆ ಎಂದು ಕೊಂಡು ನಿಜವಾದ ಕನ್ನಡಿಗರನ್ನು ಕೆಲವು ಸ್ವಾರ್ಥಿಗಳು ಅನ್ನ್ಯ ಭಾಷಿಕರೊಂದಿಗೆ ಕೂಡಿಕೊಂಡು ವಂಚಿಸುತ್ತಿದ್ದರೆ ಸಹಿಸಿಕೊಂಡು ಸುಮ್ಮನಿರುವುದು ನಿಜವಾದ ಕನ್ನಡಿಗನ ಲಕ್ಷಣವಲ್ಲ !!
ಮೊದಲು ನಮ್ಮ ನಿಮ್ಮ ನಡುವೆ ಗೋಮುಖ ವ್ಯಾಘ್ರದಂತಿರುವ ಹೀನ-ಚಾರಿತ್ರ್ಯವುಳ್ಳ ವ್ಯಕ್ತಿಗಳನ್ನು ಸದೆ ಬಡಿಯಲು ಕಂಕಣಬದ್ದರಾಗಿ ಹೋರಾಡೋಣ ! ಆಗಲೇ ಸುಭದ್ರ ಕರ್ನಾಟಕದ ಕನಸು ನನಸಾಗಲು ಸಾಧ್ಯ !
ಕನ್ನಡ ಭಾಷೆ ಉಳಿಸೋಣ. ಕನ್ನಡ ನಾಡು. ನುಡಿ. ಜಲ, ಸಂಸ್ಕೃತಿ,
ನಿಜವಾದ ಕನ್ನಡ ಪ್ರೇಮಿಗಳನ್ನು ರಕ್ಷಿಸಲು ಹೋರಾಡೋಣ !!
ನಿಜವಾದ ಕನ್ನಡಪ್ರೇಮವನ್ನು ಜಗತ್ತಿಗೆ ತೋರಿಸೋಣ !
ಎಲ್ಲರಿಗೂ ೨೦೧೬ರ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು !
No comments:
Post a Comment