Monday, June 20, 2016

ರಾಜ್ಯದಲ್ಲಿ ಮಹಿಳಾ ಸಬಲೀಕರಣದ ಕೆಲ ಉದಾಹರಣೆಗಳು :

ರಾಜ್ಯದಲ್ಲಿ "ಮಹಿಳಾ ಸಬಲೀಕರಣ" ತುಂಬಾ ಜೋರಾಗೇ ಇಂಪ್ಲಿಮೆಂಟ್ ಮಾಡ್ತಿದಾರೆ ರಾಜ್ಯ ಸರಕಾರದವರು...

ಮಹಿಳಾ ಸಬಲೀಕರಣದ ಕೆಲ ಉದಾಹರಣೆಗಳು ಹೀಗಿವೆ

1. ಅನುಪಮಾ ಶೆಣೈ(Anupama Shenoy), DySP

ಸಬಲೀಕರಣ : ಕೂಡ್ಲಿಗಿ 2 ಎತ್ತಂಗಡಿ ಒಂದೇ ದಿನದಲ್ಲಿ, ಈಗ ಅವರ ಕಡೆಯಿಂದ ರಾಜಿನಾಮೆ ಕೂಡ ಕಿತ್ತುಕೊಂಡ್ರು !


ಕಾರಣ - ಸಚಿವನ ಫೋನ್ ಹೋಲ್ಡ್ ನಲ್ಲಿ ಹಾಕಿದ್ದಕ್ಕೆ,  Murder Case ನ್ನ Suicide ಅಂತ ಬದಲಾಯಿಸಿ ಅಂತ ಬಂದಿದ್ದ ಒತ್ತಡಕ್ಕೆ ಸೊಪ್ಪು ಹಾಕದಿದ್ದಕ್ಕೆ & ಮರಳು ಮಾಫಿಯಾ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ


2. ರಶ್ಮಿ ಮಹೇಶ್ IAS

ಸಬಲೀಕರಣ : ಕಡ್ಡಾಯ ರಜೆ(Compulsory Leave)


ಕಾರಣ : 2012 ರವರೆಗೆ ಮೆಡಿಕಲ್ ಸೀಟುಗಳಲ್ಲಿ ನಡೆದ ಅವ್ಯವಹಾರದ ರಾಜಕಾರಣಿಗಳ ಹಸ್ತಕ್ಷೇಪದ ಒತ್ತಡವನ್ನ ನಿರಾಕರಿಸಿದ್ದಕ್ಕೆ & ಇವರು ATI ಅಧಿಕಾರಿಯಾಗಿದ್ದಾಗ ಇವರು 100 ಕೋಟಿ ಹಗರಣದಲ್ಲಿ ಭಾಗಿಯಾಗಿದಾರೆ ಅನ್ನೋ ಸುಳ್ಳು ಆರೋಪ

3. ತುಳಸಿ ಮದ್ದಿನೇನಿ IAS

ಸಬಲೀಕರಣ : ಕೊಪ್ಪಳದಿಂದ ಮಂಗಳೂರಿಗೆ DC post ನಿಂದ CEO ಆಗಿ ಹಿಂಬಡ್ತಿ(demotion)

ಕಾರಣ : ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಿಯ ಸಹೋದರ ಅನಧಿಕೃತವಾಗಿ ಕೃಷಿ ಭೂಮಿಯನ್ನ ವಶಪಡಿಸಿಕೊಂಡು ಕಟ್ಟುತ್ತಿದ್ದ Building Demolish ಮಾಡಿ ಅಂತ ಅಧಿಕಾರಿಗಳಿಗೆ ತುಳಸಿಯವರು order ಮಾಡಿದ್ದಕ್ಕೆ

4. ಸೋನಿಯಾ ನಾರಂಗ್ IPS

ಸಬಲೀಕರಣ : 16,000 ಕೋಟಿ ಮೈನಿಂಗ್ ಸ್ಕ್ಯಾಮ್ ನಲ್ಲಿ ಸೋನಿಯಾ ನಾರಂಗ್ ಭಾಗಿಯಾಗಿದ್ದರಂತ ಸ್ವತಃ CM ರಿಂದಲೇ ವಿಧಾನಸಭೆಯಲ್ಲಿ ಹೇಳಿಕೆ/ಆರೋಪ

ಆದರೆ ಇದೇ ಸೋನಿಯಾ ನಾರಂಗ್ ಅವರೇ ಲೋಕಾಯುಕ್ತ ಹಗರಣವನ್ನ ಬಯಲಿಗೆಳೆದದ್ದು



ನೋಡಿ ಸ್ವಾಮಿ ಇದು ಹೆಬ್ಬೆಟ್ಟಿನ ಪ್ರಭಾವ :

ಹೆಬ್ಬೆಟ್ಟಿನ ಪ್ರಭಾವದಿಂದ IAS, IPS ಯಾರು ಬೇಕಾದವರನ್ನೂ ಅಲುಗಾಡಿಸಿ ಸಬಲೀಕರಣ ಮಾಡೋದು ಹೇಗಂತ ರಾಜಕಾರಣಿಗಳಿಗೆ ತುಂಬಾನೇ ಚೆನ್ನಾಗಿ ಗೊತ್ತು.

ಆದರೆ ಈ ಹೆಬ್ಬೆಟ್ಟುಗಳಿಗೆ ಬುದ್ಧಿ ಕಲಿಸೋಕೆ ರಾಜ್ಯದ ಜನ ನಾವು ಅನ್ಯಾಯಕ್ಕೊಳಗಾದ ಪ್ರಾಮಾಣಿಕ ಅಧಿಕಾರಿಗಳ ಜೊತೆಗೀದಿವಿ ಅನ್ನೋದನ್ನ ಸರಕಾರಕ್ಕೆ & ಭ್ರಷ್ಟ ಮಂತ್ರಿಗಳಿಗೆ ತೋರಿಸೋಣ!!!

No comments:

Post a Comment

Vishwa Manava Concept by Kuvempu

Search this blog